ಕನಸುಗಾರರ ಕನಸು ಈ “ಕನಸು ಕ್ರಿಯೇಷನ್ಸ್”. ಸುಂದರ ಲೋಕದ ಬಣ್ಣ ಬಣ್ಣದ ಕನಸುಗಳ ಹೊತ್ತು ಸಾಧನೆಯ ಹಾದಿಯಲ್ಲಿ ನಮ್ಮ ಈ ಕನಸುಗಾರನ ತಂಡ . . .

ನಮ್ಮ ತಂಡ ಕಂಡ ಕನಸನ್ನು ನನಸು ಮಾಡಿಕೊಳ್ಳುವ ದಿಟ್ಟ – ಛಲಮಲ್ಲರು. ಹಲವಾರು ಏಳು ಬೀಳುಗಳ ನಡುವೆ ಮುನ್ನುಗ್ಗುತ್ತಾ ಸಾಧನೆಯ ಹಾದಿಯನ್ನು ಹಿಡಿದ ಬಲಾಢ್ಯ ಸೈನ್ಯ ನಮ್ಮದ್ದು. ಸಮಾಜದ ಒಳಿತಿಗಾಗಿ, ನೊಂದ ಜನರ ರಕ್ಷಣೆಗಾಗಿ, ಭ್ರಷ್ಟರಿಗೆ ದುಸ್ವಪ್ನವಾಗಿ, ತಮ್ಮ ಸೇವೆಯನ್ನು ಸಮಾಜದ ಒಳಿತಿಗಾಗಿ, ಶ್ರಮಿಸುತ್ತಿರುವ ಅದ್ಭುತ ಸೃಷ್ಟಿಯೇ ಈ ಕನಸು ಕ್ರಿಯೇಷನ್ಸ್. ಕನಸು ಕ್ರಿಯೇಷನ್ಸ್ ವ್ಯಾಪ್ತಿಯಲ್ಲಿ ವಿವಿಧ ಬಗೆಯ ಕಾರ್ಯ ಚಟುವಟಿಕೆಗಳನ್ನು ನೀವಿಲ್ಲಿ ಕಾಣಬಹುದು.

ನಮ್ಮ ತಂಡ ತಮ್ಮ ಮೊದಲನೆಯ ಹೆಜ್ಜೆಯಾಗಿ ತನ್ನದೇ ಆದ ವೈವಿಧ್ಯತೆಯನ್ನು, ವೈಶಿಷ್ಟತೆಯನ್ನು ಒಳಗೊಂಡ ಸವಾಲ್ ಪತ್ರಿಕೆಯ ಮೂಲಕ ಏಳು ವರ್ಷಗಳ ಹಿಂದೆ ರೂಪುಗೊಂಡಿತು. ಪಾಕ್ಷಿಕ ಪತ್ರಿಕೆಯಾದ ಸವಾಲ್ ಹುಟ್ಟಿನಿಂದಲೇ ಹದಿನಾರು ಪುಟಗಳಿಂದ ರೂಪುಗೊಂಡು ನಮ್ಮೇಲ್ಲರ ಕನಸಿನಂತೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಭ್ರಷ್ಟರನ್ನು ಬೆತ್ತಲು ಮಾಡಿ, ನೊಂದ ಅಮಾಯಕರಿಗೆ ದಾರಿ ದೀಪವಾಗಿ, ಹಲವಾರು ಏಳು ಬೀಳುಗಳ ನಡುವೆ ಸವಾಲ್ ಪತ್ರಿಕೆಯು ಭಾರಿ ಸವಾಲುಗಳನ್ನು ಎದುರಿಸಿ ಇಂದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ನಿಮ್ಮೆಲ್ಲರ ಮನಗೆದ್ದಿದೆ.

ಕನಸುಗಳೊಡನೆ ಬದುಕುತ್ತಿರುವ ತಂಡದ ಎರಡನೇ ಹೆಜ್ಜೆಯಾಗಿ ಸವಾಲ್ ಪತ್ರಿಕೆಯ ಪ್ರತಿರೂಪವಾಗಿ ಸವಾಲ್ ಟಿವಿ ದೃಶ್ಯ  ಮಾಧ್ಯಮದಲ್ಲಿ ತನ್ನ ಛಾಪನ್ನು ಮೂಡಿಸಲು ರೂಪುಗೊಳ್ಳುತ್ತಿದೆ. ಜನರಿಗಾಗಿ, ಜನರಿಗೋಸ್ಕರ ನಾನಾ ಬಗೆಯ ಮನರಂಜನೆಯ ಕಾರ್ಯಕ್ರಮಗಳನ್ನು, ಮುದುಡಿರುವ ಕಲೆಗಳನ್ನು ಅರಳುವಂತಾಗಿಸಲು, ಸಂಸ್ಕೃತಿಯೇ ಜೀವಾಳ ಎಂಬ ಧ್ಯೇಯದೊಂದಿಗೆ ಸಾರ್ವಜನಿಕರ ದನಿಯಾಗಲು ಹೊರಟಿರುವ ಸವಾಲ್ ಟಿವಿ ಕೆಲವೇ ದಿನಗಳಲ್ಲಿ ನಿಮ್ಮೆಲ್ಲರನ್ನು ರಂಜಿಸಲಿದೆ.

ಜೀವನ ಪಯಣದಂತಿಮದಲ್ಲಿ ಹಿರಿಯ ಜೀವಗಳು ತಮ್ಮವರಿಂದ ತಿರಸ್ಕೃತರಾದಾಗ ಬದುಕಲ್ಲಿ ಕತ್ತಲು ಆವರಿಸುತ್ತದೆ. ಇಂತಹ ಮುಗ್ಧ ಹಿರಿಯ ಜೀವಗಳ ಬಾಳಲ್ಲಿ ಕತ್ತಲನ್ನ ಹೋಗಲಾಡಿಸಿ ಅವರ ಬಾಳಲ್ಲಿ ಮತ್ತೊಮ್ಮೆ ಆಶಾಕಿರಣವನ್ನು ಬೆಳಗಿಸಲು ಹೊರಟ ನಮ್ಮ ಕನಸುಗಾರರ ತಂಡದ ಮತ್ತೊಂದು ಕನಸೇ ಆಶಾ ಮಂದಿರ. ನೊಂದ ಮನಗಳ ನೆಮ್ಮದಿಯ ತಾಣವೀ ಆಶಾ ಮಂದಿರ. ಹಿರಿಯ ಜೀವಗಳಿಗೆ ಭರವಸೆಯ ಆಶ್ರಯ ತಾಣವೀ ಆಶಾ ಮಂದಿರ.

ಕನಸುಗಳನ್ನು ನುಚ್ಚುನೂರು ಮಾಡುವ ರಾಕ್ಷಸರು ಅಧಿಕವಗಿರುವ ಪ್ರಜಾಪ್ರಭುತ್ವ ನಾಡಿನಲ್ಲಿ ಹಕ್ಕುಗಳ ವಂಚಿತರಿಗೇನು ಕಡಿಮೆ ಇಲ್ಲ. ಜನಸಾಮಾನ್ಯರು ಹಾಗೂ ಅವಿದ್ಯಾವಂತ ಅಮಾಯಕರು ನ್ಯಾಯ ವಂಚಿತರಾಗಿ ತಮಗೆ ಸಲ್ಲಬೇಕಾದ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಕಾನೂನಾತ್ಮಕವಾಗಿ ಒಬ್ಬ ಪ್ರಜೆಗೆ ಸಲ್ಲ ಬೇಕಾದಂತಹ ಹಕ್ಕುಗಳನ್ನು ತಿರುಗಿ ಪಡೆದುಕೊಳ್ಳಲು ಕಾನೂನಿನ ಸುವ್ಯವಸ್ಥೆಯ ಅಡಿಯಲ್ಲಿ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯನ್ನು ರೂಪಿಸಿದ ನಮ್ಮ ತಂಡ, ನೊಂದ ಜನರಿಗೆ ನ್ಯಾಯವನ್ನು ಒದಗಿಸುವಲ್ಲಿ ತನ್ನ ಮೇಲುಗೈಯನ್ನು ಸಾಧಿಸಿದೆ.

ಹೊರನಾಡು ತಾಯಿ ಅನ್ನಪೂರ್ಣೇಶ್ವರಿಯ ಆಶೀರ್ವಾದದಿಂದ, ನಿಮ್ಮಲ್ಲರ ಸಹಕಾರದಿಂದ ಕನಸುಗಾರರ ಕನಸಾದ ಕನಸು ಕ್ರಿಯೇಷನ್ಸ್ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಲಿದೆ. ಹೀಗೆ ನಿಮ್ಮೆಲ್ಲರ ಬೆಂಬಲ ಸದಾಕಾಲ ಇರಲಿ ನಮ್ಮ ಈ ಕನಸು ಕ್ರಿಯೇಶನ್ಸ್ ತಂಡದ ಮೇಲೆ ಎಂದು ಆಶಿಸುತ್ತೇವೆ. ನಿಮ್ಮೆಲ್ಲರ ನೆರಳಾಗಿ ನಾವು . . .

ಸವಾಲ್ ಪತ್ರಿಕೆ

ಸವಾಲ್ ಪತ್ರಿಕೆ ತನ್ನದೇ ಛಾಪು ಮೂಡಿಸುವ, ವೈವಿಧ್ಯತೆಯ ವೈಶಿಷ್ಟತೆಯನ್ನು ಒಳಗೊಂಡು ಪತ್ರಿಕೆಯು ೨೦೧೩-೧೪ನೇ ಸಾಲಿನಲ್ಲಿ ರೂಪುಗೊಂಡಿತು. ಲೇಖನಿಯೆಂಬ ಖಡ್ಗದಿಂದ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುತ್ತಾ, ನೊಂದವರಿಗೆ ಸಾಂತ್ವನವನ್ನು ನೀಡುತ್ತಾ, ಸಮಾಜಕ್ಕೆ ನೇರ ಹಾಗೂ ಸತ್ಯ ಮಾಹಿತಿಗಳನ್ನು ರವಾನಿಸುವ ಮುಖಾಂತರ ತನ್ನದೇ ಆದ ಅಸ್ತಿತ್ವವನ್ನು ಕಂಡುಕೊಂಡಿದೆ..

ಸವಾಲ್ ಟಿವಿ

ಸವಾಲ್ ಪತ್ರಿಕೆ ತನ್ನ ವಿಸ್ತಾರತೆಯನ್ನು ದೃಶ್ಯ ಮಾಧ್ಯಮದಲ್ಲಿ ವಿಸ್ತರಿಸಲು ಸವಾಲ್ ಟಿವಿಯಾಗಿ ಪರದೆಗಳಲ್ಲಿ ತೆರೆ ಕಾಣಲು ಸಜ್ಜಾಗಿದೆ. ಜನರಿಗಾಗಿ, ಜನರಿಗೋಸ್ಕರ, ಜನರಿಂದ ನಾನಾ ಬಗೆಯ ಮನೋರಂಜನಾ ಕಾರ್ಯಕ್ರಮಗಳನ್ನು ತಯಾರು ಮಾಡಿ ಜನರ ರಸಮಯ ಕ್ಷಣಗಳನ್ನು ಹಿಡಿದಿಡಲು ಸವಾಲ್ ಟಿ.ವಿ ರೂಪುಗೊಂಡು ನಿಮ್ಮೆದುರಿನಲ್ಲಿ ಸಿದ್ಧವಾಗಿದೆ. 

ಕಾನೂನು ಉಲ್ಲೇಖಗಳು

ಆಡಳಿತ ವಿಧಾನ ನಿರೂಪಿಸುವ ಕನ್ನಡ ಪಠ್ಯ ಪುಸ್ತಕಗಳೆಲ್ಲಿವೆ? ವೈದ್ಯಕೀಯ, ತಾಂತ್ರಿಕ ಶಿಕ್ಷಣ ಹಾಗಿರಲಿ, ಕಾನೂನು ಶಿಕ್ಷಣಕ್ಕೂ ಸಹ ಉತ್ತಮ ಪಠ್ಯ ಪುಸ್ತಗಳು ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿ ಕಾನೂನು ಕುರಿತಾದ ಕೆಲವು ಪುಸ್ತಕಗಳು ಮತ್ತು ಜನ ಸಾಮಾನ್ಯರಿಗೆ ಅರ್ಥವಾಗುವ ಲೇಖನಗಳು ಬೇಕೆನ್ನಿಸಿಕೊಳ್ಳುತ್ತವೆ. ಮಹಾಜನ್ ವರದಿ ಜಾರಿಗೆ ಆಗ್ರಹದಂತೆ ಈ ಕೂಗು ಸಹ ಬಹಳ ಕಾಲದಿಂದಲೂ ಕೇಳಿಬರುತ್ತಿದೆ.

ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ

ಪ್ರಜಾಪ್ರಭುತ್ವದ ನಾಡಿನಲ್ಲಿ ಹಕ್ಕುಗಳಿಂದ ವಂಚಿತರಾದವರ ಸಂಖ್ಯೆ ಕಡಿಮೆಯೇನಿಲ್ಲ. ಜನಸಾಮಾನ್ಯರು ಹಾಗೂ ಅವಿದ್ಯಾವಂತ ಅಮಾಯಕರು ನ್ಯಾಯ ವಂಚಿತರಾಗಿ ತಮಗೆ ಸಲ್ಲಬೇಕಾದ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಕಾನೂನಾತ್ಮಕವಾಗಿ ಒಬ್ಬ ಪ್ರಜೆಗೆ ಸಲ ಬೇಕಾದಂತಹ ಕನಿಷ್ಠ ಹಕ್ಕುಗಳನ್ನು ಪಡೆದುಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಕನಸು ತಂಡದಿಂದ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಉಗಮವಾಯಿತು.

ಆಶಾ ಮಂದಿರ

ನೊಂದ ಹಿರಿಯ ಜೀವಗಳ ಸಾಂತ್ವನ ಕೇಂದ್ರವೇ ಆಶಾಮಂದಿರ. ಬಾಳಿನಲ್ಲಿ ಭರವಸೆಯನ್ನು ಕಳೆದುಕೊಂಡು ಕತ್ತಲಾವರಿಸಿದ ಮನಸ್ಸಿಗೆ ಉಚಿತವಾಗಿ ಆಶಾಕಿರಣವು ಪ್ರಜ್ವಲಿಸುವಂತೆ ಮಾಡಲು ನಮ್ಮ ಕನಸು ಬಳಗ ಸಜ್ಜಾಗಿ ನಿಂತಿದೆ. ಹೆತ್ತ ಮಕ್ಕಳಿಂದ ಹಾಗೂ ತನ್ನವರಿಂದಲೇ ತಿರಸ್ಕೃತರಾದ ನೊಂದ ಜೀವಗಳಿಗೆ, ಭರವಸೆಯ ಬೆಳಕು ಆಶಾಮಂದಿರ.

Daily Visitors

650+

Daily Reach

1200+

Zones Covered

3+

Articles Published

1800+