ಕಾನೂನು ಉಲ್ಲೇಖಗಳು

ಆಡಳಿತ ವಿಧಾನ ನಿರೂಪಿಸುವ ಕನ್ನಡ ಪಠ್ಯ ಪುಸ್ತಕಗಳೆಲ್ಲಿವೆ? ವೈದ್ಯಕೀಯ, ತಾಂತ್ರಿಕ ಶಿಕ್ಷಣ ಹಾಗಿರಲಿ, ಕಾನೂನು ಶಿಕ್ಷಣಕ್ಕೂ ಸಹ ಉತ್ತಮ ಪಠ್ಯ ಪುಸ್ತಗಳು ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿ ಕಾನೂನು ಕುರಿತಾದ ಕೆಲವು ಪುಸ್ತಕಗಳು ಮತ್ತು ಜನ ಸಾಮಾನ್ಯರಿಗೆ ಅರ್ಥವಾಗುವ ಲೇಖನಗಳು ಬೇಕೆನ್ನಿಸಿಕೊಳ್ಳುತ್ತವೆ. ಮಹಾಜನ್ ವರದಿ ಜಾರಿಗೆ ಆಗ್ರಹದಂತೆ ಈ ಕೂಗು ಸಹ ಬಹಳ ಕಾಲದಿಂದಲೂ ಕೇಳಿಬರುತ್ತಿದೆ. ಆದರೆ ಅದಕ್ಕೆ ಬೇಕಾದ ಭಾಷೆಯ ಸಲಕರಣೆಗಳನ್ನು ಸಿದ್ಧ ಮಾಡುವುದಕ್ಕೆ ಮಾತ್ರ ನಮ್ಮ ಧೋರಣೆ ಬೇರೆ. ಪ್ರಾಥಮಿಕ ಹಂತದಿಂದ ಇಂಗ್ಲಿಷ್ ಬೇಕೇ ಬೇಕು ಅಂತಲೂ ಅನ್ನುವವರು ನಾವೇ. ಕ್ರೆಡಿಟ್ ಕಾರ್ಡ್ ವಹಿವಾಟುಗಳೂ ಕನ್ನಡದಲ್ಲೇ ಆಗಬೇಕು ಎಂದು ಒತ್ತಾಯಿಸುವವರೂ ನಾವೇ. ಇದು ನಮ್ಮ ಸಮಾಜದ ವಿಪರ್ಯಾಸ. ಇಂಗ್ಲೀಷಿನ ಬುನಾದಿಯ ಮೇಲೆ ಕನ್ನಡದ ಅರಮನೆ ಕಟ್ಟಲು ಯಾವತ್ತಾದರೂ ಸಾಧ್ಯವೇ?

ಕಾನೂನು ಕ್ಷೇತ್ರದಲ್ಲಿ ಆಳವಾದ ಅಧ್ಯಯನ, ಚಿಂತನೆಗಳನ್ನು ಮೈಗೂಡಿಸಿಕೊಂಡು ಸದಾ ಚಟುವಟಿಕೆಯಲ್ಲಿರುವ ನಮ್ಮ ತಂಡ ಕಾನೂನು ಶಿಕ್ಷಣ ಹೇಗಿರಬೇಕು ಮತ್ತು ಜನಸಾಮಾನ್ಯರಿಗೆ ಕಾನೂನು ತಿಳುವಳಿಕೆ ಉಂಟಾಗಲು ಏನೇನು ಮಾಡಬಹುದು ಎಂಬುದರ ಬಗ್ಗೆ ಪ್ರಯೋಗಾತ್ಮಕ ಯೋಜನೆಗಳನ್ನು ರೂಪಿಸುತ್ತಿದೆ. ಆಸಕ್ತರು ಮತ್ತು ವಕೀಲ ಭಾಂದವರು ಈ ಲೇಖನಗಳನ್ನು ತಮ್ಮ ಸಂಗ್ರಹಕ್ಕೆ ಸೇರಿಸಿಕೊಂಡು ಬಳಸತೊಡಗಿದರೆ ಕ್ರಮೇಣ ಕನ್ನಡ ಪ್ರೀತಿ ಮತ್ತು ಕಾನೂನು ಪ್ರಜ್ಞೆ ಜನ ಸಾಮಾನ್ಯರ ಜೀವನದಲ್ಲಿ ಹಾಸು ಹೊಕ್ಕುತ್ತದೆ.

ಕಾನೂನಿನಲ್ಲಿ ಬಳಸುವ ಭಾಷೆ ಬದಲಾಗುತ್ತಿದೆ. ಅನೇಕ ವಕೀಲರು ಈಗ ಸರಳ ಇಂಗ್ಲಿಷ್ ಶೈಲಿಯನ್ನು ಅಳವಡಿಸಿ ಕೊಳ್ಳುತ್ತಿದ್ದಾರೆ. ಆದರೆ ವಕೀಲರಲ್ಲದವರನ್ನು ಅಡ್ಡಿಪಡಿಸುವ ಕಾನೂನು ನುಡಿಗಟ್ಟುಗಳು ಇನ್ನೂ ಇವೆ. ಈ ಮಾರ್ಗದರ್ಶಿ ವಕೀಲರಲ್ಲದವರಿಗೆ ಕಾನೂನು ನುಡಿಗಟ್ಟುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಮಾರ್ಗದರ್ಶಿಯಲ್ಲಿನ ವಿವರಣೆಗಳು ನೇರ ಅಥವಾ ಪರ್ಯಾಯಗಳ ಉದ್ದೇಶವನ್ನು ಹೊಂದಿಲ್ಲ. ವಿವರಣೆಗಳು ಕಟ್ಟುನಿಟ್ಟಾಗಿ ಅಗತ್ಯವಿರುವಲ್ಲಿ ಕಾನೂನು ಪರಿಭಾಷೆಯನ್ನು ಮಾತ್ರ ಬಳಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ವಕೀಲರನ್ನು ಪ್ರೇರೇಪಿಸುತ್ತದೆ ಎಂದು ನಾವು ಭಾವಿಸಿದ್ದರೂ, ಕಟ್ಟುನಿಟ್ಟಾದ ಕಾನೂನು ವ್ಯಾಖ್ಯಾನಗಳನ್ನು ನೀಡುವ ಬದಲು ವಿಚಾರಗಳು ಮತ್ತು ಪರಿಕಲ್ಪನೆಗಳನ್ನು ವಿವರಿಸಲು ಇಲ್ಲಿ ನಮ್ಮ ಮಾತುಗಳಿವೆ.

ಕಾನೂನಿನ ಬಗ್ಗೆ ಅಜ್ಞಾನದಿಂದಲೇ ಬಹಳಷ್ಟು ಜನರಿಗೆ ಕೋರ್ಟು, ಕಚೇರಿ, ಪೋಲಿಸು ಎಂದರೆ ಹೆದರಿಕೆ. ಈ ಅಜ್ಞಾನಕ್ಕೆ ಒಂದು ಕಾರಣ ನಮ್ಮ ಬಹುತೇಕ ಕಾನೂನುಗಳು ಇಂಗ್ಲಿಷಿನಲ್ಲಿ ಇರುವುದು. ಇಂತಹ ಕಾನೂನಿನ ಅಂಶಗಳನ್ನು ಸರಳವಾದ ಕನ್ನಡದಲ್ಲಿ, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸುವುದೇ ನಮ್ಮ ಉದ್ದೇಶ. ಗಡಿಬಿಡಿಯ ಈ ದಿನಗಳಲ್ಲಿ ಯಾವುದೇ ವಿಷಯವನ್ನು ಆಳವಾಗಿ ಓದಿ, ತಿಳಿದುಕೊಳ್ಳುವ ಪುರುಸೊತ್ತು ಮತ್ತು ತಾಳ್ಮೆ ಇಲ್ಲದಿರುವಾಗ ದಿನ ನಿತ್ಯದ ಜೀವನದ ಉದ್ದಕ್ಕೂ ತಿಳಿದುಕೊಳ್ಳಬೇಕಿರುವ ಹಲವಾರು ಕಾನೂನುಗಳನ್ನು ಪ್ರಶ್ನೆ ಮತ್ತು ಉತ್ತರದ ರೂಪದಲ್ಲಿ ನಿಮ್ಮ ಮುಂದಿಡಲಿದ್ದೇವೆ.