ನವದೆಹಲಿ: ಸತತ ಮೂರನೇ ದಿನ ತೈಲ ದರದಲ್ಲಿ ಏರಿಕೆ ಕಂಡುಬಂದಿದೆ. ಆ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶನಿವಾರ ಮತ್ತೊಂದು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದಂತಾಗಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ₹ 102.14 ಮತ್ತು ಮುಂಬೈನಲ್ಲಿ ₹108.19 ಆಗಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯು ₹ 105.69 ಆಗಿದೆ.
ಇದಕ್ಕೂ ಮೊದಲು, ಮೇ 4 ರಿಂದ ಜುಲೈ 17 ರ ನಡುವೆ ಪೆಟ್ರೋಲ್ ಬೆಲೆಯನ್ನು ₹11.44 ರಷ್ಟು ಹೆಚ್ಚಿಸಲಾಗಿತ್ತು. ಈ ಅವಧಿಯಲ್ಲಿ ಡೀಸೆಲ್ ದರವು ₹ 9.14 ಏರಿಕೆಯಾಗಿತ್ತು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಗೆ ಅನುಗುಣವಾಗಿ ಭಾರತದಲ್ಲಿ ತೈಲ ಬೆಲೆ ಏರಿಸಲಾಗಿದೆ ಎಂದು ಮಾರಾಟ ಕಂಪನಿಗಳು ಹೇಳಿವೆ.