ಹೊಸದಿಲ್ಲಿ: ತಮ್ಮ ವಿರುದ್ಧ ಹಲವು ಕಡೆ ಬಿಜೆಪಿಯು ದೇಶದ್ರೋಹದ ಆರೋಪವನ್ನು ಬಿಜೆಪಿಯು ಮಾಡಿದ್ದು ನಮಗೆ ಬಹಳ್ ಬೇಸರವನ್ನು ಉಂಟು ಮಾಡಿದೆ,ನಮ್ಮನ್ನು ‘ತುಕ್ಡೆ ತುಕ್ಡೆ‘ ಗ್ಯಾಂಗ್ ಎಂದಿದ್ದ ಬಿಜೆಪಿಯನ್ನು ನಾವು ತುಕ್ಡೆ ತುಕ್ದೆ ಮಾಡಿಯೇ ತಿರುತ್ತೇವೆ ಎಂದು ಸವಾಲ್ ಹಾಕಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಕಾಂಗ್ರೆಸ್ ಸೇರ್ಪಡೆಯಾದ ಕನ್ನಯ್ಯ ಕುಮಾರ್ ಈ ರೀತಿಯ ಹೇಳಿಕೆ ನೀಡಿ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬಹುದು ಎಂದು ಅವರು ದೃಢ ನಂಬಿಕೆಯನ್ನು ಮಾಧ್ಯಮಗಳ್ ಮುಖಾಂತರ ವ್ಯಕ್ತಪಡಿಸಿದ್ದಾರೆ.
“ಬಿಜೆಪಿ ನನ್ನನ್ನು ‘ತುಕ್ಡೆ ತುಕ್ಡೆ ಗ್ಯಾಂಗ್’ ಎಂದು ಕರೆಯುತ್ತದೆ. ನಾನು ಬಿಜೆಪಿ ಪಾಲಿಗೆ ತುಕ್ಡೆ ತುಕ್ಡೆ. ನಾನು ಬಿಜೆಪಿಯನ್ನು ತುಕ್ಡೆ ತುಕ್ಡೆ ಮಾಡುತ್ತೇನೆ. ಈ ಪಕ್ಷವು ಗೋಡ್ಸೆಯನ್ನು ರಾಷ್ಟ್ರಪಿತ ಎಂದು ಪರಿಗಣಿಸಿದೆಯೇ ಹೊರತು ಗಾಂಧಿಯನ್ನಲ್ಲ. ಅವರು ಅಮೆರಿಕ ಅಧ್ಯಕ್ಷರ ಮುಂದೆ ಮಾತ್ರವೇ ಗಾಂಧಿಯನ್ನು ಹೊಗಳುತ್ತಾರೆ” ಎಂದು ಕನ್ನಯ್ಯ ಕುಮಾರ್ ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ‘ನಾಥೂರಾಮ್-ವಿನಾಶದ ಜೋಡಿ’ ಎಂದು ವ್ಯಂಗ್ಯವಾಡಿರುವ ಕನ್ನಯ್ಯ, ಬಿಜೆಪಿ ಸಿದ್ಧಾಂತವು ದೇಶದ ಪಿತಾಮಹನ ಆಶಯಗಳಿಗೆ ಬಹಿರಂಗವಾಗಿಯೇ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.
‘ಅನೇಕ ಯುವಜನರಂತೆ, ಈಗ ತಡವಾಗುತ್ತಿದೆ ಎಂದು ನನಗೂ ಅನಿಸುತ್ತಿದೆ. ದೇಶದ ಸ್ವಾತಂತ್ರ್ಯವನ್ನು ಪಡೆಯಲು, ಸ್ವಾತಂತ್ರ್ಯವನ್ನು ರಕ್ಷಿಸಲು ಹೋರಾಡಿದ ಪರಂಪರೆಯುಳ್ಳ ಪಕ್ಷವು ಅತಿ ಹೆಚ್ಚು ಶಕ್ತಿಶಾಲಿಯಾಗಿರಬೇಕು. ಇಂದು ರಾಜಕೀಯ ಬೆಳವಣಿಗೆಯ ಮೇಲೆ ಗಮನಹರಿಸುವ ಜನರು ಮಾತ್ರವೇ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.