ಕೋವಿಡ್‌ನಿಂದ ಚೇತರಿಸಿಕೊಂಡವರಿಗೆ ಶಾಕಿಂಗ್ ನ್ಯೂಸ್‌: ಪ್ರತಿ ಮೂವರಲ್ಲಿ ಒಬ್ಬರಿಗೆ ದೀರ್ಘ ಕಾಲ ಕಾಡಲಿದೆಯಂತೆ ‘ಕರೋನ’

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕೋವಿಡ್ -19 ನಂತರದ ರೋಗಿಗಳಲ್ಲಿ ಕಾಣಿಸಿಕೊಳ್ಳುವ ((Long Covid Symptoms) ಕೋವಿಡ್ ರೋಗಲಕ್ಷಣಗಳಿಗೆ ಸಂಬಂಧಿಸಿದ ಅಧ್ಯಯನದಲ್ಲಿ ಆಘಾತಕಾರಿ ಸಂಗತಿಗಳನ್ನು ಕಂಡು ಕೊಂಡಿದ್ದು ಆತಂಕವನ್ನು ಹೆಚ್ಛಳ ಮಾಡಿದೆ. ಹೌದು, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ನಂತರವೂ, ಪ್ರತಿ 3 ರೋಗಿಗಳಲ್ಲಿ ಒಬ್ಬರು ದೀರ್ಘ ಕೋವಿಡ್‌ನ ಲಕ್ಷಣಗಳನ್ನು ಹೊಂದಿರುತ್ತಾರೆ ಎನ್ನುವ ಆಘಾತಕಾರಿ ಅಂಶವನ್ನು ಹೊರ ಹಾಕಿದೆ.

 

(Long Covid Symptoms) ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ರಿಸರ್ಚ್‌ನ ತಜ್ಞರ ತಂಡವು ಈ ಅಧ್ಯಯನವನ್ನು ನಡೆಸಿದೆ. ಇನ್ನೂ ಅಧ್ಯಯನದ ಸಮಯದಲ್ಲಿ, ಕೋವಿಡ್ -19 (Covid 19) ಸೋಂಕಿನಿಂದ ಚೇತರಿಸಿಕೊಳ್ಳುವ ರೋಗಿಗಳನ್ನು ಆರೋಗ್ಯದಲ್ಲಿನ ಬದಲಾವಣೆಗಳು ಮತ್ತು ಅವರು ಅನುಭವಿಸಿದ ಸಮಸ್ಯೆಗಳ ಬಗ್ಗೆ ಅರ್ಥಮಾಡಿಕೊಳ್ಳಲು ವಿಶ್ಲೇಷಿಸಲಾಯಿತು ಅಂತ ತಿಳಿಸಿದೆ.

37 ರಷ್ಟು ಜನರಲ್ಲಿ ದೀರ್ಘ ಕೋವಿಡ್‌ನ ಲಕ್ಷಣಗಳು ಕಂಡುಬರುತ್ತವೆ ಅಂತ ತಿಳಿಸಿದೆ.

ಸೈನ್ಸ್ ಜರ್ನಲ್ PLOS ಮೆಡಿಸಿನ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ, ಕೋವಿಡ್ -19 ಸೋಂಕಿನ 3 ರಿಂದ 6 ತಿಂಗಳ ನಂತರವೂ ಸುಮಾರು 37 ಪ್ರತಿಶತದಷ್ಟು ಜನರು ಅನೇಕ ರೀತಿಯ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಸಂಶೋಧಕರು ಹೇಳುತ್ತಾರೆ. ಹೆಚ್ಚಿನ ರೋಗಲಕ್ಷಣಗಳನ್ನು ಗಮನಿಸಲಾಗಿದೆ. ತಜ್ಞರ ಪ್ರಕಾರ, ಕರೋನ ಸೊಂಕಿನಿಂದ ಹೊರ ಬಂದವರಲ್ಲಿ ಕಂಡುಬರುವ ದೀರ್ಘ ಕೋವಿಡ್ (ಲಾಂಗ್ ಕೋವಿಡ್ ರೋಗಲಕ್ಷಣಗಳ ನಂತರದ ಚೇತರಿಕೆಯ) ಪ್ರಮುಖ ಲಕ್ಷಣಗಳು ಹೀಗಿದೆ

  • ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು
  • ದೇಹದ ನೋವು
  • ವಿಪರೀತ ಆಯಾಸ
  • ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು
  • ಹೊಟ್ಟೆಯ ಕಾಯಿಲೆಗಳು

ಸಂಶೋಧನೆಯ ಸಮಯದಲ್ಲಿ, ಈ ಹಿಂದೆ ಕೋವಿಡ್ -19 ಸೋಂಕಿಗೆ ಒಳಗಾದ ಮತ್ತು ಈಗ ಚೇತರಿಸಿಕೊಳ್ಳುತ್ತಿರುವ 2 ಲಕ್ಷ 70 ಸಾವಿರ ಜನರ ಕೇಸ್ ಸ್ಟಡಿ ಮಾಡಲಾಯಿತು. ಸಂಶೋಧಕರು ಹೇಳುತ್ತಾರೆ, ಅಧ್ಯಯನದ ಸಮಯದಲ್ಲಿ, ಕೋವಿಡ್ ರೋಗಿಗಳಲ್ಲಿ ಮೂರನೇ ಒಂದು ಭಾಗದಷ್ಟು ಜನರು ಸೋಂಕಿನ ನಂತರ 3-6 ತಿಂಗಳ ನಂತರವೂ ದೀರ್ಘ ಕೋವಿಡ್‌ನ ಕನಿಷ್ಠ ಒಂದು ಲಕ್ಷಣವನ್ನು ಹೊಂದಿರುವುದನ್ನು ಗಮನಿಸಿದ್ದು, ವೃದ್ಧರು ಮತ್ತು ಪುರುಷರು ಉಸಿರಾಟದ ತೊಂದರೆ ಮತ್ತು ಮಾನಸಿಕ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಯುವಕರು ಮತ್ತು ಮಹಿಳೆಯರಿಗೆ ಹೆಚ್ಚಿನ ತಲೆನೋವು ಮತ್ತು ಹೊಟ್ಟೆಯ ಸಮಸ್ಯೆಗಳು ಇದ್ದವು ಅಂತ ಕಂಡು ಕೊಂಡಿದೆ.

Leave a Reply

Your email address will not be published. Required fields are marked *