ದೈವಸ್ಥಾನಗಳನ್ನು ಧಾರ್ಮಿಕ ಪರಿಷತ್‌ನಿಂದ ಹೊರಗಿಡಬೇಕು; ಮಾಜಿ ಸಚಿವ ಬಿ ರಮಾನಾಥ ರೈ

SavalTv.com
ದೈವಸ್ಥಾನದಲ್ಲಿ ಭಂಡಾರ ಇಡುವುದು ಕಟ್ಟುಪಾಡಿಗೆ ವಿರೋಧವಾಗಿದ್ದು, ಎಲ್ಲರೂ ಅದನ್ನು ವಿರೋಧಿಸಬೇಕು. ದೈವಸ್ಥಾನದ ಭಂಡಾರದಲ್ಲಿ ಚಿನ್ನಾಭರಣಗಳಿರುತ್ತವೆ. ಅಮೂಲ್ಯ ವಸ್ತುಗಳಿರುತ್ತವೆ. ಅದನ್ನು ರಕ್ಷಣೆ ಮಾಡಬೇಕಾದರೆ ಅದು ಸಂಬಂಧಪಟ್ಟ ಭಂಡಾರ ಮನೆ, ಬೀಡುವಿನಲ್ಲಿಇರಬೇಕು. ದೈವಸ್ಥಾನದಲ್ಲಿ ಕಳ್ಳತನ ನಡೆದರೆ ಅದಕ್ಕೆ ಯಾರು ಹೊಣೆ ಎಂದು ಬಿ.ರಮಾನಾಥ ರೈ ಪ್ರಶ್ನಿಸಿದರು.

ಮಂಗಳೂರು: ದೈವಸ್ಥಾನವನ್ನು ಎಂಡೋಮೆಂಟ್‌ನಿಂದ ಹೊರಗಿಡಬೇಕು. ಧಾರ್ಮಿಕ ಪರಿಷತ್‌ ಇದರಲ್ಲಿ ಮೂಗು ತೂರಿಸುವುದು ಸರಿಯಲ್ಲ. ಸಂಪ್ರದಾಯವನ್ನು ಮುರಿಯುವುದು ದೈವಾರಾಧನೆಯ ಕಟ್ಟುಪಾಡಿಗೆ ವಿರುದ್ಧವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.  ನಗರದ ಸಕ್ರ್ಯೂಟ್‌ ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಅವರು, ದೈವಾರಾಧನೆ ಪ್ರವಾಸೋದ್ಯಮ ಕೇಂದ್ರವಲ್ಲ. ಅದೊಂದು ಭಕ್ತಿಯ ಕೇಂದ್ರ. ಕರಾವಳಿ ಭಾಗದಲ್ಲಿ ದೈವದ ಭಂಡಾರವನ್ನು ದೈವಸ್ಥಾನದಲ್ಲಿ ಇಡೋದಿಲ್ಲ.

ಸಾಮಾನ್ಯವಾಗಿ ಭಂಡಾರ ಮನೆಯಲ್ಲಿಡುವುದು ಸಂಪ್ರದಾಯ, ಯಾವುದೇ ಕಾರಣಕ್ಕೂ ದೈವಸ್ಥಾನದಲ್ಲಿ ಇಡುವ ಸಂಪ್ರದಾಯವಿಲ್ಲ. ಆದರೆ ಧಾರ್ಮಿಕ ಪರಿಷತ್‌ನವರು ದೈವಜ್ಞ ಪ್ರಶ್ನೆ ಇಟ್ಟು ಬಂಟ್ವಾಳ ತಾಲೂಕಿನ ಮೊಗರ್ನಾಡು ಸೀಮೆಯ ದೈವಗಳ ಭಂಡಾರವನ್ನು ದೈವಸ್ಥಾನದಲ್ಲಿ ಇರಿಸಲು ಹೊರಟಿರುವುದು ಧಾರ್ಮಿಕ ನಂಬಿಕೆಗೆ ಅಪಚಾರ ಎಂದು ಹೇಳಿದರು. 

ರಾವಳಿಯಲ್ಲಿ ದೈವಾರಾಧನೆ ಅನಾದಿ ಕಾಲದಿಂದಲೂ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಅದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವುದು ಕಟ್ಟು ಕಟ್ಟಳೆ. ದೈವಸ್ಥಾನದಲ್ಲಿ ಭಂಡಾರ ಇಡುವುದು ಕಟ್ಟುಪಾಡಿಗೆ ವಿರೋಧವಾಗಿದ್ದು, ಎಲ್ಲರೂ ಅದನ್ನು ವಿರೋಧಿಸಬೇಕು. ದೈವಸ್ಥಾನದ ಭಂಡಾರದಲ್ಲಿ ಚಿನ್ನಾಭರಣಗಳಿರುತ್ತವೆ. ಅಮೂಲ್ಯ ವಸ್ತುಗಳಿರುತ್ತವೆ. ಅದನ್ನು ರಕ್ಷಣೆ ಮಾಡಬೇಕಾದರೆ ಅದು ಸಂಬಂಧಪಟ್ಟ ಭಂಡಾರ ಮನೆ, ಬೀಡುವಿನಲ್ಲಿಇರಬೇಕು. ದೈವಸ್ಥಾನದಲ್ಲಿ ಕಳ್ಳತನ ನಡೆದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಹರಿನಾಥ್‌, ಎಪಿಎಂಸಿ ಮಾಜಿ ಸದಸ್ಯ ಜಯಶೀಲ ಅಡ್ಯಂತಾಯ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಶೋಕ್‌ ಡಿ.ಕೆ., ಧಾರ್ಮಿಕ ಪರಿಷತ್‌ ಮಾಜಿ ಸದಸ್ಯ ಪದ್ಮನಾಭ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *