ಮೈಸೂರು ದಸರಾ | ಗಜಪಡೆಗಳು ಕಣಕ್ಕೆ

ಸಪ್ಟೆಂಬರ್೧೯; ೨೦೨೧ ರ ಜಗತ್ಪ್ರಸಿದ್ದ ದಸರಾ ಉತ್ಸವಕ್ಕೆ ಮೈಸೂರು ಸಿದ್ಧವಾಗುತ್ತಿದೆ. ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳು ಬಾಕಿಯುಳಿದಿರುವುದರಿಂದ ಸಾಂಸ್ಕ್ರತಿಕ ನಗರಿಯು ಬಹಳ ಆವೇಶದಿಂದ ಸಜ್ಜಾಗುತ್ತಿದೆ. ದಸರಾದ ಮುಖ್ಯ ಆಕರ್ಷಣೆಯಾದ ಜಂಬೂ ಸವಾರಿಗೆ ಅರಮನೆ ಆವರಣದಲ್ಲಿ ಪೂರ್ವ ಸಿದ್ಧತೆ ನಡೆಯುತ್ತಿದೆ.


ಬಾನುವಾರದಿಂದ ಆರಂಭಗೊಂಡ ಗಜಪಡೆಯ ತಾಲೀಮಿಗೆ ಈ ಬಾರಿಯೂ ಅಭಿಮನ್ಯುನೇ ಸಾರಥಿ. ಕಳೆದ ಏಳು ವರ್ಷಗಳಿಂದ ಅಂಬಾರಿಗೆ ಅಭಿಮನ್ಯು ಹೆಗಲು ಕೊಡುತ್ತಿದ್ದು ಈ ಭಾರಿಯೂ ಗಜಪಡೆಯನ್ನು ಅವನೇ ಮುನ್ನಡೆಸಲಿದ್ದಾನೆ. ಅರಮನೆ ಆವರಣದಲ್ಲಿ ನಡೆಯುವ ಜಂಬೂ ಸವಾರಿಗೆ ಇಂದು ಪೂರ್ವಸಿದ್ದತೆಯು ನಡೆಯುತ್ತಿದ್ದು ಕಳೆಗಟ್ಟುತ್ತಿದೆ

Leave a Reply

Your email address will not be published. Required fields are marked *