ಹೆಚ್ಚುತ್ತಿರುವ ಅತ್ಯಾಚಾರ ; ರಾಜಧಾನಿಯಲ್ಲಿ ಮತ್ತೊಂದು ರೇಪ್ ಕೇಸ್

ಬೆಂಗಳೂರು: ಸ್ಮಾಂಸ್ಕ್ರತಿಕ ನಗರ ಮೈಸೂರಲ್ಲಿ  ಅತ್ಯಾಚಾರದ ಕಹಿ ಘಟನೆ ಮಾಸುವ ಮುನ್ನವೇ ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ

 

ಮೈಸೂರಿನ ಸಾಮೂಹಿಕ ಅತ್ಯಾಚಾರ ಘಟನೆ ಮಾಸೋ ಮುನ್ನವೇ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕಹಿ ಘಟನೆ ನಡೆದಿದೆ. ಖಾಸಗಿ ಲೇಔಟ್ ನಲ್ಲಿ ಕಾರಿನಲ್ಲಿಯೇ ಕುಳಿತಿದ್ದಂತ ಯುವಕ – ಯುವತಿಯರ ಖಾಸಗಿ ವೀಡಿಯೋ ಮಾಡಿ, ಐದು ಲಕ್ಷಕ್ಕೆ ಬೇಡಿಕೆ ಇಟ್ಟಂತ ಘಟನೆ ನಡೆದಿದ್ದರು, ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಯುವತಿಯೊಬ್ಬಳು ಸಂಬಂಧಿಕರೊಬ್ಬರ ಜೊತೆಯಲ್ಲಿ ಇದೇ ಸೆಪ್ಟೆಂಬರ್ 25ರಂದು ಬೆಳಿಗ್ಗೆ 11 ಗಂಟೆಯ ಹಾಗೆ ಖಾಸಗಿ ಲೇಔಟ್ ಒಂದರಲ್ಲಿನ ಜಾಗದಲ್ಲಿ ಕಾರಿನಲ್ಲಿಯೇ ಕುಳಿತು ಸ್ನ್ಯಾಕ್ಸ್ ತಿನ್ನುತ್ತಾ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿಯೇ ಆಗಮಿಸಿದಂತ ಐವರಿದ್ದಂತ ಪುಂಡರ ಗುಂಪು, ಅವರ ಖಾಸಗಿ ವೀಡಿಯೋ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದೆ.

ಈ ಘಟನೆಯಿಂದ ಭಯಭೀತರಾದಂತ ಯುವಕ – ಯುವತಿಯರು ಗಲಿಬಿಲಿಗೊಂಡು ಭಯಗೊಂಡಿದ್ದಾರೆ. ಹಣ ಕೊಡದೇ ಇದ್ದರೇ ನಿಮ್ಮ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚೋದಾಗಿಯೂ ಬೆದರಿಸಿದ್ದಾರೆ. ಆದ್ರೇ ಈ ವೇಳೆಗೆ ದೂರದಲ್ಲಿ ಜನರು ಬಂದಿದ್ದನ್ನು ಕಂಡು ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಪ್ರಕರಣದ ನಂತ್ರ ಯುವತಿಯು ಸಮೀಪದ ಅನುಗೊಂಡನಹಳ್ಳಿ ಪೊಲೀಸ್ ಠಾಣೆಗೆ ತೆರಳಿ, ದೂರು ನೀಡಿದ್ದಾರೆ. ಪ್ರಕರಮವನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು, ಐಪಿಸಿ ಸೆಕ್ಷನ್ 354 (ಎ) ( ಮಹಿಳೆಯ ಮಾನಭಂಗ ಮಾಡುವ ಉದ್ದೇಶದಿಂದ ಅವಳ ಮೇಲೆ ಹಲ್ಲೆ, ಬಲಪ್ರಯೋಗ ) 354 ( ಡಿ ). 504, 149, 384 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಐವರು ಕೀಚಕರನ್ನು ಬಂದಿಸಿದ್ದಾರೆ.   

Leave a Reply

Your email address will not be published. Required fields are marked *