BIG NEWS: ಜೇಮ್ಸ್ ಬಾಂಡ್ ಹೆಸರಲ್ಲಿ ಕಳ್ಳತನ; 007 ಎಂದು ಗೋಡೆ ಮೇಲೆ ಬರೆದು ಎಸ್ಕೇಪ್; ಬಿಚ್ಚು ಗ್ಯಾಂಗ್ ನ ನಾಲ್ವರು ಖದೀಮರ ಬಂಧನ

ಬೆಂಗಳೂರು: ಕರ್ನಾಟಕದಲ್ಲಿ ‘ಜೇಮ್ಸ್ ಬಾಂಡ್’ ಹೆಸರಿನಲ್ಲಿ ಹಾಗೂ ರಾಜಸ್ಥಾನದಲ್ಲಿ ಬಿಚ್ಚು ಗ್ಯಾಂಗ್ ಹೆಸರಲ್ಲಿ ಕಳ್ಳತನ ಮಾಡುತ್ತಿದ್ದ ಬಿಚ್ಚು ಗ್ಯಾಂಗ್ ನ ನಾಲ್ವರು ಖದೀಮರನ್ನು ಇದೀಗ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಶೋ ರೂಂ ಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈ ಗ್ಯಾಂಗ್ ರಾತ್ರಿ ವೇಳೆ ಶೋ ರೂಂ ಗಳಿಗೆ ನುಗ್ಗಿ ಹಣವನ್ನು ದೋಚುತ್ತಿದ್ದರು. ಅಲ್ಲದೇ ಮನೆಗಳಲ್ಲೂ ಕಳ್ಳತನ ಮಾಡಿ ಬಳಿಕ ಗೋಡೆಯ ಮೇಲೆ ‘007 ಫಿರ್ ಆಯೇಂಗೆ’ ಎಂದು ಬರೆದು ಎಸ್ಕೇಪ್ ಆಗುತ್ತಿದ್ದರು.

ಆಗಸ್ಟ್ 22ರ ರಾತ್ರಿ ಕೆ.ಆರ್.ಮಾರ್ಕೆಟ್ ಬಳಿಯ ಟೆಕ್ಸ್ ಟೈಲ್ಸ್ ಸೇಲ್ಸ್ ಕಾರ್ಪೊರೇಷನ್ ನಲ್ಲಿ ಕಳ್ಳತನ ಮಾಡಿ ಶೋ ರೂಂ ಡ್ರಾದಲ್ಲಿದ್ದ 25.45 ಲಕ್ಷ ಹಣ ಕದ್ದು ಪರಾರಿಯಾಗಿದ್ದರು. ಕಳ್ಳತನದ ಬಳಿಕ ಗೋಡೆ ಮೇಲೆ ಕೋಡ್ ವರ್ಡ್ ಬರೆದು ತೆರಳಿದ್ದರು. ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.

.

ಪ್ರಕರಣದ ಬೆನ್ನುಹತ್ತಿದ್ದ ಮಾರ್ಕೆಟ್ ಪೊಲೀಸರು 15 ದಿನಗಳ ಕಾಲ ರಾಜಸ್ಥಾನದಲ್ಲಿ ಬೀಡುಬಿಟ್ಟು ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಿಚ್ಚು ಗ್ಯಾಂಗ್ ನ ಸುನೀಲ್, ಭವಾನಿ ಸಿಂಗ್, ಆಶುರಾಮ್ ಗುಜಾರ್ ಹಾಗೂ ಕಿಶೋರ್ ಸಿಂಗ್ ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *